Home / Community News / ಸರೇ ಚಾಂಪಿಯನ್‌ಶಿಪ್‌: ಕನ್ನಡಿಗರುಯುಕೆ ಕ್ರಿಕೆಟ್ ಕ್ಲಬ್‌ನ ಪಯಣ

ಸರೇ ಚಾಂಪಿಯನ್‌ಶಿಪ್‌: ಕನ್ನಡಿಗರುಯುಕೆ ಕ್ರಿಕೆಟ್ ಕ್ಲಬ್‌ನ ಪಯಣ

2023ರಲ್ಲಿ Uxbridge ಕ್ರಿಕೆಟ್ ಮೈದಾನದಲ್ಲಿ ಮೊದಲ ಕ್ರಿಕೆಟ್ ಲೀಗ್ ಆರಂಭಿಸಿದಾಗ, ಒಂದು ದಿನ ನಮ್ಮದೇ ತವರು ಮೈದಾನ ಇರುತ್ತದೆ, ಸರೇ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆಲ್ಲುತ್ತೇವೆ ಎಂದು ಊಹಿಸಿರಲಿಲ್ಲ. 2026ರ ಋತುವಿನಲ್ಲಿ ಆ ಕನಸು ನನಸಾಯಿತು!

ಕಳೆದ ವರ್ಷ ಜೂಲೈ ತಿಂಗಳಿನಲ್ಲಿ ವಾಲ್ಟನ್-ಆನ್-ಥೇಮ್ಸ್‌ನಲ್ಲಿ ಕೌನ್ಸಿಲ್ ಮೈದಾನವನ್ನು ಪಡೆದು ಕನ್ನಡಿಗರುಯುಕೆ ಕ್ರಿಕೆಟ್ ಕ್ಲಬ್ ಕಟ್ಟುವ ಕೆಲಸ ಆರಂಭವಾಯಿತು. ಹೊಸದಾಗಿ ಕ್ಲಬ್ ಸ್ಥಾಪಿಸುವುದು ಸುಲಭದ ಕೆಲಸವಾಗಿರಲಿಲ್ಲ. ಸಮಾನ ಮನಸ್ಕರು, ಆಟಗಾರರು ಮತ್ತು ಹಿತೈಷಿಗಳು ಸಾಧ್ಯವಾದ ರೀತಿಯಲ್ಲಿ ಕೈಜೋಡಿಸಿದರು. ಉತ್ತಮ ಮೈದಾನ ನಿರ್ವಹಣೆ, ಕ್ಲಬ್‌ಗಾಗಿ ರೋಲರ್ ಮತ್ತು ಪಂದ್ಯಗಳಿಗೆ ತಕ್ಕ ಕ್ರಿಕೆಟ್ ಪಿಚ್‌ಗಳನ್ನು ಸಿದ್ಧಪಡಿಸುವ ಮೂಲಕ ಮೈದಾನಕ್ಕೆ ರೂಪು ನೀಡಲಾಯಿತು.

ಒಂದು ಕ್ರಿಕೆಟ್ ಕ್ಲಬ್ ನಿರ್ಮಿಸಲು ಹಣಕಾಸಿನ ಹೂಡಿಕೆಯ ಜೊತೆಗೆ ನಿರಂತರ ಶ್ರಮವೂ ಬೇಕು. ಇಂದು ಕನ್ನಡಿಗರುಯುಕೆ ಕ್ರಿಕೆಟ್ ಕ್ಲಬ್ ಗೆ ಉತ್ತಮ ಮೈದಾನ, ಸೂಕ್ತ ಪೆವಿಲಿಯನ್ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಒಟ್ಟಿಗೆ ಆಡುವುದನ್ನು ಆನಂದಿಸುವ ಆಟಗಾರರ ಬಳಗವಿದೆ.

2026 ನೇ ವರ್ಷ ಕನ್ನಡಿಗರುಯುಕೆ ಕ್ರಿಕೆಟ್ ಕ್ಲಬ್ ಗೆ ನಂಬಿಕೆ, ಒಗ್ಗಟ್ಟು ಮತ್ತು ಸಾಧನೆಯ ಋತು. ಸರೇ ಕ್ರಿಕೆಟ್ ಚಾಂಪಿಯನ್‌ಶಿಪ್‌ನ ಮೊದಲ ಲೀಗ್ ಋತುವಿನಲ್ಲೇ ಕ್ಲಬ್ಬಿನ 1ನೇ XI ತಂಡ ಡಿವಿಷನ್ 11 ವೆಸ್ಟ್ ಸೆಂಟ್ರಲ್ ಚಾಂಪಿಯನ್ ಆಗಿದೆ. ಇದು ತಂಡಕ್ಕಷ್ಟೇ ಅಲ್ಲ, ಇಡೀ ಕ್ಲಬ್‌ಗೆ ಹೆಮ್ಮೆಯ ಮೈಲಿಗಲ್ಲು. ಈ ಸಾಧನೆ ಎಲ್ಲಾ ಆಟಗಾರಿಗೆ, ತಂಡದ ನಾಯಕರಿಗೆ ಮತ್ತು ಬೆಂಬಲಿಸಿದ ಸಮೂದಾಯಕ್ಕೆ ಸಲ್ಲುತ್ತದೆ.
2027ರಲ್ಲಿಯೂ ಕ್ಲಬ್ ನ ಯಶಸ್ಸು ಆಟಗಾರರು, ಸ್ವಯಂಸೇವಕರು ಮತ್ತು ಕುಟುಂಬಗಳು ಒಟ್ಟಾಗಿ ಕ್ಲಬ್ ಬೆಳೆಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಮಹಿಳಾ ತಂಡವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಮಹಿಳೆಯರು ಮತ್ತು ಬಾಲಕಿಯರಿಗೆ ತರಬೇತಿ ಪಡೆಯಲು, ಆಡಲು ಹಾಗೂ ನಾಯಕತ್ವ ವಹಿಸಲು ಆತ್ಮೀಯ ಅವಕಾಶಗಳನ್ನು ಕಲ್ಪಿಸಲು ಬದ್ಧರಾಗಿದ್ದೇವೆ ಎಂದು ಕ್ಲಬ್ ಈಗಾಗಲೇ ತಿಳಿಸಿದೆ.

Leave a Reply

Your email address will not be published. Required fields are marked *